ಇಮ್ರಾನ್ ಸರ್ಧಾರಿಯಾ (ಜನನ ೨೮ ಡಿಸೆಂಬರ್ ೧೯೭೯) ಒಬ್ಬ ಭಾರತೀಯ ನೃತ್ಯ ಸಂಯೋಜಕ ಮತ್ತು ಚಲನಚಿತ್ರ ನಿರ್ದೇಶಕ ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಮತ್ತು ಕೆಲವು ಬಾಲಿವುಡ್ ಚಲನಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರು ದಿವಂಗತ ಹಾಜಿ ಅಯೂಬ್ ಅವರ ಪುತ್ರ. == ವೃತ್ತಿ == ಸರ್ಧಾರಿಯಾ ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಪ್ರಸಿದ್ಧ ನೃತ್ಯ ನಿರ್ದೇಶಕ. ಇವರು ೨೫೦ ಕ್ಕೂ ಹೆಚ್ಚು ಹಾಡುಗಳು ಮತ್ತು ಸಂಕ್ಷಿಪ್ತವಾಗಿ ೧೦೦ ಚಲನಚಿತ್ರಗಳ ಯಶಸ್ಸನ್ನು ಕಂಡಿದ್ದಾರೆ. ಜೊತೆಗೆ, ಅವರು ಎರಡು ತೆಲುಗು ಚಲನಚಿತ್ರಗಳಾದ ಜೋಶ್ ಮತ್ತು ಚಾಲಾಕಿಯಲ್ಲಿ ಕೆಲಸ ಮಾಡಿದ್ದಾರೆ. ಹಮ್ ಆಪ್ಕೆ ಹೈ ಕೌನ್‌ನಲ್ಲಿ ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಶ್ರೀ ಜೈ ಬೋರಾಡೆ ಅವರಿಂದ ಐದು ವರ್ಷಗಳ ಕಾಲ ತರಬೇತಿ ಪಡೆದಿದ್ದಾರೆ. ಅವರು ಬೆಂಗಳೂರಿನಲ್ಲಿ ಡಿಂಕೀಸ್ ಡ್ಯಾನ್ಸ್ ಅಂಡ್ ಮ್ಯೂಸಿಕ್ ಅಕಾಡೆಮಿ (ಡಿ.ಡಿ.ಎಮ್.ಎ) ಎಂದು ಕರೆಯಲ್ಪಡುವ ನೃತ್ಯ ಶಾಲೆಯನ್ನು ಹೊಂದಿದ್ದಾರೆ. ೨೦೧೫ ರಲ್ಲಿ ಅಜಯ್ ರಾವ್‌ ಮತ್ತು ರಾಧಿಕಾ ಪಂಡಿತ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ ಎಂದೆಂದಿಗೂ ಚಿತ್ರದ ಮೂಲಕ ಇಮ್ರಾನ್ ಸರ್ಧಾರಿಯಾ ನಿರ್ದೇಶನವನ್ನು ಪ್ರಾರಂಭಿಸಿದರು. ಇದನ್ನು ಎಸ್‌ವಿ ಪ್ರೊಡಕ್ಷನ್‌ನ ಎಸ್‌ವಿ ಬಾಬು ನಿರ್ಮಿಸಿದ್ದಾರೆ. ಇದರಲ್ಲಿ ವಿ.ಹರಿಕೃಷ್ಣ ಸಂಗೀತ , ವೆಂಕಟೇಶ್ ಅಂಗುರಾಜ್ ಕ್ಯಾಮೆರಾ ಮತ್ತು ದೀಪು ಎಸ್ ಕುಮಾರ್ ಸಂಕಲನ ಮಾಡಿದ್ದಾರೆ. ಅವರು ೨೦೧೭ ರಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (ರಿಯಾಲಿಟಿ ಶೋ) ತೀರ್ಪುಗಾರರಲ್ಲಿ ಒಬ್ಬರಾಗಿದ್ದರು. == ಪ್ರಶಸ್ತಿಗಳು == ನೃತ್ಯ ಸಂಯೋಜನೆಗಾಗಿ ಅವರು ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರ ಅರ್ಹತೆಗಳ ಜೊತೆಗೆ ಅವರು ಇ ಟಿವಿ, ಝೀ ಟಿವಿ ಕನ್ನಡ, ಕಸ್ತೂರಿ ಕನ್ನಡ ವಾಹಿನಿಗಳಿಂದ ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ಪ್ರಶಸ್ತಿಗಳನ್ನು ಗಳಿಸಿದ್ದಾರೆ. == ಚಿತ್ರಗಳು == === ನಿರ್ದೇಶಕ === === ನೃತ್ಯ ಸಂಯೋಜಕ === == ಉಲ್ಲೇಖಗಳು ==